• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮಾಲೇಕಲ್ಲು ತಿರುಪತಿ ರಥೋತ್ಸವಕ್ಕೆ ಸಿದ್ಧತೆ
ರಾಜ್ಯದ ಬಹುಭಾಗಗಳ ಭಕ್ತರನ್ನು ಈ ಪುಣ್ಯಕ್ಷೇತ್ರ ನಗರದಿಂದ ಈಶಾನ್ಯ ಭಾಗದ ನಿಸರ್ಗ ವೈಭವಗಳೊಂದಿಗೆ ತಿರುಪತಿ ಗ್ರಾಮದಲ್ಲಿ ಗೋವಿಂದರಾಜಸ್ವಾಮಿ ಮಹಾಲಕ್ಷ್ಮೀ ನೆಲೆಸಿದ್ದಾರೆ. ಪ್ರತಿವರ್ಷದಂತೆ ಆಷಾಢ ದ್ವಾದಶಿ ದಿನದಂದು ಜು.7ರಂದು ವಿಜೃಂಭಣೆಯ ರಥೋತ್ಸವ ನಡೆಯಲಿದೆ. ರಾಜ್ಯದ ವಿವಿಧ ಭಾಗ ಭಾಗಳಿಂದ ೧ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಲಿದ್ದು, ಅದರಲ್ಲೂ ನವ ವಧು-ವರರು ವಿಶೇಷವಾಗಿ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ತಪ್ಪದೇ ಪಡೆದು ಕಡಿದಾದ ೧೨೦೦ ಮೆಟ್ಟಿಲುಗಳನ್ನು ಹೊಂದಿರುವ ಮಾಲೇಕಲ್ ತಿರುಪತಿ ಬೆಟ್ಟವನ್ನು ಹತ್ತಿ ಬೆಟ್ಟದ ಮೇಲಿರುವ ಶ್ರೀನಿವಾಸ-ಮಹಾಲಕ್ಷ್ಮೀ ದೇವರ ದರ್ಶನ ಪಡೆದರೆ ಅವರ ಜೀವನ ಸುಖಕರವಾಗುವುದೆಂಬ ಪ್ರತೀತಿ ಇದೆ.
ರೈತ ಭವನದಲ್ಲಿ ಖಾಝಿ ಮುಲಾಖಾತ್ ಕಾರ್ಯಕ್ರಮ
ಹಾಸನ ಜಿಲ್ಲಾ ಸಂಯುಕ್ತ ಜಮಾಅತ್‌ನ ಖಾಝಿ ಮಾಣಿ ಉಸ್ತಾದ್ ನೇತೃತ್ವದಲ್ಲಿ ರೈತ ಭವನದಲ್ಲಿ ಖಾಝಿ ಮುಲಾಖಾತ್ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು. ಧಾರ್ಮಿಕ ಪಂಡಿತ ಹುಸೇನ್ ಸೌದಿ ಕೆ.ಸಿ. ರೋಡ್ ಮಾತನಾಡಿ, ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ತ್ಯಾಗ ಮತ್ತು ಸೇವೆಯಿಂದ ಸಿಗುತ್ತದೆ. ಧರ್ಮವನ್ನು ಉಳಿಸಿಕೊಳ್ಳುವುದು ಅವಶ್ಯ. ಜೀವನದಲ್ಲಿ ಸಮಾಧಾನ ಬಯಸುವವರೆಗೆ ಸ್ವಾರ್ಥವನ್ನು ತೊರೆಯಬೇಕು. ಐಶ್ವರ್ಯ ಸಿಕ್ಕರೆ ಎಲ್ಲವನ್ನು ಮರೆಯುವ ಸ್ಥಿತಿ ಬರುತ್ತದೆ. ದೇವನ ಭಯದಲ್ಲಿ ಬದುಕಬೇಕು. ಧಾರ್ಮಿಕ ಪಂಡಿತರು ಮತ್ತು ಸಮುದಾಯದ ನಾಯಕರು ಒಗ್ಗೂಡಿ ಧರ್ಮ ಉಳಿಸಲು ಸಮಾಲೋಚನೆ ನಡೆಸಬೇಕು ಎಂದು ಕರೆ ನೀಡಿದರು.
ಮಾದಕ ವ್ಯಸನದಿಂದ ಎಲ್ಲರ ನೆಮ್ಮದಿ ಹಾಳು
ಮಾದಕ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳು, ಹಣ ಸಿಗದಿದ್ದರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ನಂತರ ಪೊಲೀಸರಿಗೆ ಸಿಕ್ಕಿಬಿದ್ದು, ಕಷ್ಟ, ಅವಮಾನ ಅನುಭವಿಸುವ ಜತೆಗೆ ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಜತೆಗೆ ಕುಟುಂಬದ ನೆಮ್ಮದಿಯೂ ಹಾಳುಗುತ್ತದೆ. ಆದ್ದರಿಂದ ಎಲ್ಲರ ನೆಮ್ಮದಿಯ ಜೀವನಕ್ಕಾಗಿ ಮಾದಕ ವ್ಯಸನಕ್ಕೆ ಯಾರೂ ಬಲಿಯಾಗಬಾರದು ಎಂದು ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್‌ಪಿ ಶಾಲೂ ಎಚ್ಚರಿಸಿದರು.
ನಾಳೆ ಕೊಣನೂರಿನಲ್ಲಿ ಶ್ರೀಧರಗೌಡ ಹುಟ್ಟುಹಬ್ಬ ಆಚರಣೆ
ಕಾಂಗ್ರೆಸ್ ಮುಖಂಡ ಎಚ್. ಪಿ. ಶ್ರೀಧರ್ ಗೌಡರ ಹುಟ್ಟುಹಬ್ಬವನ್ನು ಅಭಿಮಾನಿ ಬಳಗದ ವತಿಯಿಂದ ಜೂ.25ರಂದು ಕೊಣನೂರಿನಲ್ಲಿ ಆಚರಿಸಲಾಗುತ್ತಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ. ವಿ. ಗುರುಮೂರ್ತಿ ತಿಳಿಸಿದ್ದಾರೆ. ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ (ಮಹಿಳೆ ಮತ್ತು ಹೃದಯ ಸಂಬಂಧಿತ) ಶಿಬಿರದಲ್ಲಿ ಉಚಿತವಾಗಿ ಎಕೋ ಪರೀಕ್ಷೆ, ಇಸಿಜಿ, ರಕ್ತ ಪರಿಕ್ಷೆ ಮಾಡಲಾಗುವುದು ಹಾಗೂ ವೇದಿಕೆ ಕಾರ್ಯಕ್ರಮವು ಕೊಣನೂರಿನ ವಿನುತಾ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಶಾಸಕ ಬಂಡೀಸಿದ್ದೇಗೌಡ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ
ಹಲವು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಸರ್ಕಾರಿ ಜಮೀನನ್ನು ಬಗರ್‌ಹುಕುಂ ಅಡಿ ಮುಸ್ಲಿಂರಿಗೆ ಮಂಜೂರು ಮಾಡುವ ಅಧಿಕಾರಿಯನ್ನು ನೇಣಿಗೇರಿಸುತ್ತೇನೆ ಎಂದು ಹೇಳಿರುವ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಹೇಳಿಕೆ ಖಂಡಿಸಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಯುವಜನತೆ ದುಶ್ಚಟಗಳಿಂದ ಸಮಾಜಕ್ಕೂ ಮಾರಕವಾಗುತ್ತಿದ್ದಾರೆ
ಮಕ್ಕಳ ವಿದ್ಯಾಭ್ಯಾಸಕ್ಕೆ ತೋರುವ ಆಸಕ್ತಿಯನ್ನು ಅವರ ಚಲನವಲನಗಳನ್ನು ಗಮನಿಸುವತ್ತ ಪೋಷಕರು ಬೆಳಸಿಕೊಂಡರೆ ತಮ್ಮ ಮಕ್ಕಳು ತಪ್ಪು ದಾರಿಯಲ್ಲಿ ಹೋಗುವುದನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕಿವಿಮಾತು ಹೇಳಿದರು. ಕುಟುಂಬಕ್ಕೆ ಆಧಾರವಾಗಿ, ಸಮಾಜಕ್ಕೆ ಆಸ್ತಿಯಾಗಬೇಕಾದ ಯುವಜನತೆ ದುಶ್ಚಟಗಳಿಗೆ ದಾಸರಾಗಿ ತಮ್ಮ ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಮಾರಕವಾಗುತ್ತಿರುವುದು ಕಳವಳದ ಸಂಗತಿ ಎಂದು ಡಿವೈಎಸ್‌ಪಿ ಬಿ. ಆರ್‌. ಗೋಪಿ ಕಳವಳ ವ್ಯಕ್ತಪಡಿಸಿದರು.
ಜಮೀರ್‌ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಸ್ವಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ವಸತಿ ಸಚಿವ ಜಮೀರ್‌ ಅಹಮ್ಮದ್ ಖಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತಾಲೂಕು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಬಾಳ್ಳುಪೇಟೆ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು ವಸತಿ ಯೋಜನೆಯಡಿ ಮನೆಗಳು ಬೇಕಾದರೆ ಹಣ ನೀಡಲೇ ಬೇಕು. ಸ್ವಪಕ್ಷದ ನಾಯಕರೆ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ತನಿಖೆಗೆ ಮುಂದಾಗಿದೆ. ಆದ್ದರಿಂದ ಸರ್ಕಾರದ ಒಂದು ಭಾಗವಾಗಿರುವ ಸಚಿವರು ತಮ್ಮ ಸ್ಥಾನದಲ್ಲಿ ಮುಂದುವರಿದರೆ ನಿಸ್ಪಕ್ಷಪಾತ ತನಿಖೆ ಅಸಾಧ್ಯ. ಆದ್ದರಿಂದ, ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಕಲೇಶಪುರ ತಾಲೂಕಲ್ಲಿ ವ್ಯಾಪಕ ಮಳೆ
ಸಕಲೇಶಪುರ ತಾಲೂಕಿನಲ್ಲಿ ಆರಿದ್ರ್ಯಾ ಮಳೆಯ ಅಬ್ಬರ ಮುಂದುವರಿದಿದ್ದು ಸೋಮವಾರ ಸಂಜೆಯಿಂದ ಬಿರುಸು ಪಡೆದಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಶಾಲಾ ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದ್ದರೆ, ಮಳೆಯಿಂದಾಗಿ ಹೇಮಾವತಿ ನದಿಯ ಒಡಲು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳೆಲ್ಲವೂ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಳೆಯಿಂದಾಗಿ ಚಳಿ ಹೆಚ್ಚಿದ್ದು ಜನರು ಮನೆಬಿಟ್ಟು ಹೊರಬಾರದ ಕಾರಣ ಪಟ್ಟಣ ಸೇರಿದಂತೆ ಹೋಬಳಿ ಕೇಂದ್ರದ ರಸ್ತೆಗಳು ನಿರ್ಜನಗೊಂಡಿವೆ.
ಬಿಳಿಸುಳಿ ರೋಗ ನಿಯಂತ್ರಣಕ್ಕೆ ವಿಸ್ತೃತ ವರದಿ
ಬಿಳಿಸುಳಿ ರೋಗ ವೀಕ್ಷಣೆಗೆ ಕೇಂದ್ರದ ವಿಜ್ಞಾನಿಗಳ ತಂಡ ಜಿಲ್ಲೆಯ ಆಲೂರು, ಹೊಳೆನರಸೀಪುರ, ಅರಕಲಗೂಡು, ಬೇಲೂರು ತಾಲೂಕುಗಳಲ್ಲಿ ಆಯ್ದ ಭಾಗಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿರುವ ತಂಡದೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಳಿಸುಳಿ ರೋಗ ನಿಯಂತ್ರಿಸಲು ಅಧ್ಯಯನಕ್ಕಾಗಿ ತಜ್ಞರ ತಂಡವನ್ನು ಜಿಲ್ಲೆಗೆ ಕಳುಹಿಸಿಕೊಡುವಂತೆ ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಲಾಗಿತ್ತು. ಅದರಂತೆ ತಜ್ಞರ ತಂಡದವರು ಜಿಲ್ಲೆಯ ವಿವಿಧ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಎಂದರು.
ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಿಲ್ಲಿಸಿದ ತಹಸೀಲ್ದಾರ್‌
ಇಲ್ಲಿ ಖಾಸಗಿಯವರಿಗೆ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟಿದ್ದು ಯಾರು? ನೀವು ಕಣ್ಣು ಮುಚ್ಚಿ ಕುಳಿತಿದ್ದೀರಾ ಎಂದು ಹರಿಹಾಯ್ದರು.
  • < previous
  • 1
  • ...
  • 54
  • 55
  • 56
  • 57
  • 58
  • 59
  • 60
  • 61
  • 62
  • ...
  • 506
  • next >
Top Stories
ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ಮದ್ದೂರು ಗಲಭೆ ಪ್ರೀ ಪ್ಲ್ಯಾನ್ಡ್‌?
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು
ಗೃಹಲಕ್ಷ್ಮಿ ಮೃತ ಫಲಾನುಭವಿಗಳ ತೆಗೆದುಹಾಕಿ : ಸಿದ್ದು
ಮಗು ಕಳೆದುಕೊಂಡ ನೋವು ಸದಾ ಇರುತ್ತೆ : ಭಾವನಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved