ಬಾಳೆ ಬೆಳೆ ತುಳಿದು ನಾಶ ಮಾಡಿದ ಕಾಡಾನೆಗಳ ಹಿಂಡುಬೇಲೂರು ತಾಲೂಕಿನ ಅರೇಹಳ್ಳಿ ಸಮೀಪದ ಮಾಲಹಳ್ಳಿ ಕಾಫಿ ತೋಟದ ಕೆರೆಯಲ್ಲಿ ಬುಧವಾರ ರಾತ್ರಿ 15ಕ್ಕೂ ಹೆಚ್ಚು ಆನೆಗಳು ಈಜಾಡುವುದರ ಜೊತೆಗೆ ಕಾಫಿ, ಅಡಿಕೆ, ಮೆಣಸು ಹಾಗೂ ಬಾಳೆಗಿಡಗಳ ಫಸಲನ್ನು ನಾಶ ಮಾಡಿದ್ದು ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಈ ಬಗ್ಗೆ ಕಾಫಿ ತೋಟದ ಮಾಲೀಕ ಚಂದ್ರು ಮಾತನಾಡಿ, ನಮ್ಮ ತೋಟಕ್ಕೆ 15ಕ್ಕೂ ಹೆಚ್ಚು ಆನೆಗಳು ಬುಧವಾರ ರಾತ್ರಿ ಲಗ್ಗೆ ಇಟ್ಟಿವೆ. ಕಷ್ಟಪಟ್ಟು ಬೆಳೆದಿದ್ದ ಕಾಫಿ ಗಿಡ, ಬಾಳೆ ಗಿಡ ಹಾಗೂ ಅಡಿಕೆ ಮರಗಳನ್ನು ನಾಶ ಮಾಡಿದ್ದು ಅಂದಾಜು 5 ಲಕ್ಷ ರು. ಬೆಳೆ ಹಾನಿ ಸಂಭವಿಸಿದೆ ಎಂದಿದ್ದಾರೆ.