ಇಂದು ಚನ್ನರಾಯಪಟ್ಟಣದಲ್ಲಿ ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಸನ ಜಿಲ್ಲಾ ಘಟಕ ಮತ್ತು ಚನ್ನರಾಯಪಟ್ಟಣ ತಾಲೂಕು ಘಟಕದ ವತಿಯಿಂದ ರಾಜ್ಯದಲ್ಲೇ ಪ್ರಥಮ ಪತ್ರಿಕಾ ವಿತರಕರ ಜಿಲ್ಲಾ ಸಮ್ಮೇಳನವನ್ನು ಮಾ.೨ರಂದು ಹಮ್ಮಿಕೊಳ್ಳಲಾಗಿದೆ. ಪತ್ರಿಕಾ ವಿತರಕರ ಗೋಷ್ಠಿ, ಕುಟುಂಬಗಳಿಗೆ ಕ್ರೀಡಾಕೂಟ, ಪತ್ರಿಕಾ ವಿತರಕರ ಕುಟುಂಬಗಳಿಗೆ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ಇ-ಶ್ರಮ್ ಕಾರ್ಡ್ ವಿತರಣೆ, ಅಂಬೇಡ್ಕರ್ ಸಹಾಯಹಸ್ತ ಯೋಜನೆ, ಪತ್ರಿಕಾ ವಿತರಕರ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ.