ಭಾರೀ ಮಳೆಗೆ ಹೊಗೆಸೊಪ್ಪಿನ ಗಿಡಗಳ ಬೆಳವಣಿಗೆ ಕುಂಠಿತರಾಮನಾಥಪುರದ ತಂಬಾಕು ಮಾರುಕಟ್ಟೆಯ ಫ್ಲಾಟ್ ಫಾರಂ 7ರ ಮತ್ತು 63ರ ಮಾರುಕಟ್ಟೆ ವ್ಯಾಪ್ತಿಯಲ್ಲಿ ಹೊಗೆಸೊಪ್ಪು ಬೆಳೆಯು, ಭಾಗಶಃ ಭಾರಿ ಹಾನಿಯಾಗಿದೆ. ಕೆಲವು ಬೆಳಗಾರರ ಬೆಳೆ ಸಂಪೂರ್ಣ ಹಾನಿಯಾಗಿದೆ. ಕೊಣನೂರು, ಮಲ್ಲಿಪಟ್ಟಣ, ದೊಡ್ಡಮಗ್ಗೆ, ರಾಮನಾಥಪುರ ಮುಂತಾದ ಫ್ಲಾಟ್ ಫಾರಂ 7 ಹಾಗೂ 63 ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೆಳೆಗಳು ಹಾನಿಯಾಗಿದೆ. ಈ ವರ್ಷ ಮೇ ಮತ್ತು ಜೂನ್‌ನಲ್ಲಿ ಸತತವಾಗಿ ವಾರಗಟ್ಟಲೆ ಮಳೆ ಸುರಿದಿರುವುದರಿಂದ ಅತಿಯಾದ ತಂಬಾಕು ನಾಟಿ ಮಾಡಿದ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಹೊಗೆ ಸೊಪ್ಪು ಗಿಡಗಳು ಬೆಳವಣಿಗೆ ಆಗದೆ ಹೊಗೆಸೊಪ್ಪು ಉತ್ಪಾದನೆ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಾಗಲಿದೆ.