ಹದಗೆಟ್ಟ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಕರವೇ ಪ್ರತಿಭಟನೆ ಈ ರಸ್ತೆ ಗುಂಡಿ ಬಿದ್ದು ಸುಮಾರು ವರ್ಷಗಳು ಕಳೆದಿವೆ, ತಾತ್ಕಾಲಿಕವಾಗಿ ತೇಪೆ ಹಾಕಿ ಮುಚ್ಚುವ ಕೆಲಸ ಮಾಡುತ್ತಾರೆ ಹೊರತು, ಶಾಶ್ವತ ಪರಿಹಾರ ಇಲ್ಲಿವರೆಗೂ ಮಾಡಿಲ್ಲ. ಈ ಜಾಗದಲ್ಲಿ ಸಾಕಷ್ಟು ಅಪಘಾತಗಳು ನಡೆದಿದ್ದು, ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ. ಇಲ್ಲಿಯ ಶಾಸಕರು ತಾಲೂಕು ಪೂರ್ಣ ಅಭಿವೃದ್ಧಿ ಆಗಿದೆ ಎಂದು ನೆಪ ಹೇಳುತ್ತಾರೆ ಹೊರತು, ಯಾವುದೇ ರೀತಿಯ ಕೆಲಸ- ಕಾರ್ಯಗಳಾಗಿಲ್ಲ.