ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿಹನ್ಯಾಳು ಸರ್ಕಾರಿ ಪ್ರೌಢಶಾಲೆಗೆ ಬರುವ ವಿದ್ಯಾರ್ಥಿಗಳ ಮನೆಗಳಿಗೆ ರಾತ್ರಿ ಸಂಚಾರ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಭೇಟಿ ಕೊಟ್ಟು ಪೋಷಕರೊಂದಿಗೆ ಸಂವಹನ ನಡೆಸಿ ಅವರು ಮನವಿ ಮಾಡಿದರು. ತಮ್ಮ ಶಾಲೆಗಳಿಗೆ ಹನ್ಯಾಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸೋಂಪುರ, ಮಧರನಹಳ್ಳಿ, ಸುಬೇದಾರನಕೊಪ್ಪಲು, ಆನಂದೂರುಗಳಿಂದ ಬರುವ ವಿದ್ಯಾರ್ಥಿಗಳ ಮನೆಗಳಿಗೆ ತಮ್ಮ ಶಾಲಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪೋಷಕರೊಂದಿಗೆ ಅವರವರ ಮಕ್ಕಳ ಪ್ರಗತಿಯನ್ನು ಮುಕ್ತವಾಗಿ ಚರ್ಚಿಸಿ, ಮಗುವಿನ ಓದಿನ ಮಟ್ಟ ಹೇಗಿದೆ, ಇನ್ನೂ ಯಾವ ಮಟ್ಟದಲ್ಲಿ ತಮ್ಮ ಮಕ್ಕಳು ಓದಬೇಕು, ಓದಿನಲ್ಲಿ ಪೋಷಕರ ಪಾತ್ರ ಏನು ಎಂಬುವುದರ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.