ನರ್ಸಿಂಗ್ ವೃತ್ತಿಯಲ್ಲಿ ಜ್ಞಾನದ ಜತೆಗೆ ಸಹಾನುಭೂತಿಯೂ ಮುಖ್ಯವೈದ್ಯಕೀಯ ಹಾಗೂ ನರ್ಸಿಂಗ್ ಸೇವೆಯಲ್ಲಿ ಜ್ಞಾನ, ಕೌಶಲ್ಯ ಹಾಗೂ ಮಾನವೀಯತೆಯ ಜತೆಗೆ ಸಹಾನುಭೂತಿ ಅತ್ಯಗತ್ಯ. ಕರ್ತವ್ಯದಲ್ಲಿ ಒಲವು, ಕರ್ತವ್ಯದಲ್ಲಿ ಬದ್ಧತೆ ಹಾಗೂ ನ್ಯಾಯ ಒದಗಿಸುವ ಮನೋಭಾವ ಇರಬೇಕು. ಇವುಗಳು ಶುಶ್ರೂಷಕ ವೃತ್ತಿಯಲ್ಲಿ ಆತ್ಮತೃಪ್ತಿ ಮತ್ತು ಸೇವಾ ಕಾರ್ಯದಲ್ಲಿ ಯಶಸ್ಸುಗಳಿಸುವ ಜತೆಗೆ ಕಲಿತ ವಿದ್ಯೆಯಲ್ಲಿ ಪರಿಪೂರ್ಣ ವ್ಯಕ್ತಿ ಆಗಲು ಸಾಧ್ಯವೆಂದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿಕುಮಾರ್ ಬಿ.ಸಿ. ಸಲಹೆ ನೀಡಿದರು.