ಟೆಂಡರ್ ಕರೆಯುವ ಮುನ್ನ ಪ್ರಚಾರ ಮಾಡಿಲ್ಲವೆಂದು ಸ್ಥಳೀಯ ನಿವಾಸಿಗಳ ಪ್ರತಿಭಟನೆವಾರದ ಸಂತೆ ಮತ್ತು ದಿನವಹಿ ಮಾರುಕಟ್ಟೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷೆ ತಾಹಿರಾ ಬೆಂಗಂ ಪ್ರತಿಭಟನಾಕಾರರಿಗೆ ಹೇಳಿದರು. ಪ್ರತಿವರ್ಷ ಸಂತೆ, ದಿನವಹಿ ಮಾರುಕಟ್ಟೆ ಹರಾಜು ಮಾಡುವ ಮುನ್ನ ಹ್ಯಾಂಡ್ಬಿಲ್ ಹಂಚುವುದು ಸೇರಿದಂತೆ ಆಟೋ ಮೂಲಕ ಪ್ರಚಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಯಾರಿಗೂ ಗೊತ್ತಿಲ್ಲದ ಹಾಗೆ ಟೆಂಡರ್ ಪ್ರಕ್ರಿಯೆ ಮುಗಿದಿರುವುದರ ಹಿಂದೆ ಇರುವ ಕಾರಣವಾದರೂ ಏನು ಎಂದು, ಸದಸ್ಯರಾದ ತೌಫಿಕ್, ಖಾಲಿದ್, ಧರ್ಮ, ನಿಂಗರಾಜು, ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.