ನಾಗರನವಿಲೆಗೆ ಡಿಸಿಎಂ ಶಿವಕುಮಾರ್ ಭೇಟಿಪ್ರಖ್ಯಾತ ನಾಗ ದೇವರ ಕ್ಷೇತ್ರ ಎಂದೇ ಖ್ಯಾತವಾಗಿರುವ ದೇವಾಲಯಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ವಿಶೇಷ. ಈ ಹಿಂದೆ ಮೈತ್ರಿ ಸರ್ಕಾರ ಬೀಳುವ ಹಂತದಲ್ಲಿದ್ದಾಗ ಬಿ. ಎಸ್. ಯಡಿಯೂರಪ್ಪ ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದರು. ದೇವರಲ್ಲಿ ಭಕ್ತಿ ಹೊಂದಿರುವ ಡಿಕೆಶಿ, ತಮ್ಮ ಗುರು ಕಾಡಸಿದ್ದೇಶ್ವರ ಮಠದ ಶ್ರೀಗಳ ಮಾರ್ಗದರ್ಶನದಂತೆ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದು ಗಮನ ಸೆಳೆಯಿತು. ಇಷ್ಟಾರ್ಥ ಸಿದ್ಧಿಗೆ ಹೆಸರುವಾಸಿಯಾಗಿರುವ ನಾಗದೇವರ ಜತೆಗೆ ಹಂದಿನಕೆರೆ ದೇವರಿಗೂ ಅವರು ಪೂಜೆ ಮಾಡಿಸಿದರು. ಪೂಜೆ ಸಂದರ್ಭದಲ್ಲಿ ಮೊಬೈಲ್, ಕ್ಯಾಮರಾಗಳಲ್ಲಿ ಫೋಟೋ, ವಿಡಿಯೋ ತೆಗೆಯದಂತೆ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಅವರು ಮೊದಲೇ ಸೂಚನೆ ನೀಡಿದ್ದು ಕುತೂಹಲ ಹೆಚ್ಚಿಸಿತ್ತು.