ನುಗ್ಗೆಳ್ಳಮ್ಮ ಕೆಂಪಮ್ಮ ದೇವಿ ಅದ್ಧೂರಿ ರಥೋತ್ಸವಜಾತ್ರಾ ಮಹೋತ್ಸವ ಅಂಗವಾಗಿ ಶ್ರೀನುಗ್ಗೇಳ್ಳಮ್ಮ, ಶ್ರೀ ಕೆಂಪಮ್ಮ ದೇವಿಗೆ ಬೆಳಿಗ್ಗೆಯಿಂದಲೇ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಬೆಂಗಳೂರು ಸೇರಿದಂತೆ ಈ ಭಾಗದ ಬಸವನಪುರ, ಮುದ್ದನಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಹೂವಿನಹಳ್ಳಿ, ಸಮುದ್ರ ಹಳ್ಳಿ, ವಿರುಪಾಕ್ಷಪುರ, ಜಿ.ಎನ್. ಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ಶ್ರೀನುಗ್ಗೆಳ್ಳಮ್ಮ, ಶ್ರೀ ಕೆಂಪಮ್ಮಗೆ ರಾತ್ರಿ ಮಹಾಮಂಗಳಾರತಿ ನಂತರ ಸೋಮನ ಕುಣಿತದೊಂದಿಗೆ ದೇವಾಲಯದ ಆವರಣದಲ್ಲಿ ಉತ್ಸವ ನಡೆಸಿ ನಂತರ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.