ಪೌಷ್ಟಿಕ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕುಉತ್ತಮ ಮತ್ತು ಗುಣಮಟ್ಟದ ಆಹಾರ ಸೇವನೆ ಪ್ರತಿಯೊಬ್ಬರ ಹಕ್ಕಾಗಿದ್ದು, ಆರೋಗ್ಯಪೂರ್ಣ ಜೀವನ ಸಾಗಿಸಲು ಪೌಷ್ಟಿಕ ಆಹಾರದ ಅರಿವು ಅಗತ್ಯವಾಗಿದೆ ಎಂದು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಕಿರಣ್ ಕುಮಾರ್ ಡಿ. ವಡಿಗೇರಿ ಹೇಳಿದರು. ಆರೋಗ್ಯಪೂರ್ಣ ಜೀವನ ಶೈಲಿಗೆ ಪೌಷ್ಟಿಕ ಆಹಾರ ಒಂದು ಪ್ರಮುಖ ಹಕ್ಕು. ಅಪೌಷ್ಟಿಕತೆ ಕೇವಲ ಆಹಾರದ ಕೊರತೆಯಿಂದ ಮಾತ್ರವಲ್ಲ, ಅಪ್ರಾಪ್ತ ವಯಸ್ಸಿನ ವಿವಾಹದಿಂದಲೂ ಬರುತ್ತದೆ. 18 ವರ್ಷ ತುಂಬುವ ಮುನ್ನ ಹೆಣ್ಣುಮಕ್ಕಳನ್ನು ವಿವಾಹ ಮಾಡುವುದು ಕಾನೂನಾತ್ಮಕ ಅಪರಾಧವಾಗಿದ್ದು, ಅದರಿಂದ ದೈಹಿಕ–ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ ಎಂದು ತಿಳಿಸಿದರು.