ಆಲೂರು ತಾಲೂಕಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 988 ವಿದ್ಯಾರ್ಥಿಗಳುಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳು ಮಾ.21 ರಿಂದ ಏಪ್ರಿಲ್ 4 ವರೆಗೆ ನಡೆಯಲಿದ್ದು, ತಾಲೂಕಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಆಲೂರು, ಬೆಥೆಸ್ಥಾ ಪ್ರೌಢಶಾಲೆ ಬೈರಾಪುರ, ಸರ್ಕಾರಿ ಪ್ರೌಢಶಾಲೆ ಕಾಮತಿ ಕೂಡಿಗೆ, ಕರ್ನಾಟಕ ಪಬ್ಲಿಕ್ ಶಾಲೆ ರಾಯರಕೊಪ್ಪಲು ಹಾಗೂ ಎಸ್.ಕೆ.ಎನ್.ಆರ್.ಎಚ್ ಪ್ರೌಢಶಾಲೆ ಕೆ. ಹೊಸಕೋಟೆಯ ಈ ಐದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ತಿಳಿಸಿದ್ದಾರೆ.