ಒತ್ತಡರಹಿತ ಜೀವನದಿಂದ ಹೃದಯದ ಆರೋಗ್ಯ ರಕ್ಷಣೆಮಾರಣಾಂತಿಕ ಕಾಯಿಲೆಗಳಾದ ಹೃದಯಾಘಾತ ತಡೆಯಲು ಸಾರ್ವಜನಿಕರಲ್ಲಿ ಅರಿವುಮ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಸದೃಢರಾಗಬೇಕು, ಎಣ್ಣೆ ರಹಿತ ಆಹಾರವನ್ನ ಸೇವಿಸಬೇಕು, ಮದ್ಯಪಾನ ತ್ಯಜಿಸಬೇಕು, ಮಾದಕ ವಸ್ತುಗಳಾದ ಡ್ರಗ್ಸ್ ಸೇವನೆಯನ್ನು ತ್ಯಜಿಸಬೇಕು. ಎಲ್ಲವನ್ನು ನಾವು ಮೈಗೂಡಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ. ಮಾಧ್ಯಮ ಮಿತ್ರರಲ್ಲಿ ಒಂದು ಮನವಿ ಪ್ರತಿ ಹಳ್ಳಿಗೂ, ಪ್ರತಿಮನೆಗೂ, ಈ ಸಂದೇಶ ತಲುಪುವಂತೆ ಮಾಡಬೇಕು ಜನರಿಗೂ ಈ ಬಗ್ಗೆ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.