ಗಣಪತಿ ಪೆಂಡಾಲ್‌ನಲ್ಲಿ ಮಹಾಗಣಪತಿ ಹೋಮಶ್ರೀ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ನಡೆಸಲಾಯಿತು. ಶ್ರೀ ಗಣಪತಿ ಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕಾರ ನೆರವೇರಿಸಲಾಯಿತು. ವಿಶೇವವಾಗಿ ರಚಿಸಿದ್ದ ಮಂಡಲದ ಪಕ್ಕದಲ್ಲಿ ನಿರ್ಮಿಸಿದ್ದ ಹೋಮ ಕುಂಡಕ್ಕೆ ಪುಣ್ಯಹವಾಚನೆ, ಕಳಸ ಪೂಜೆ, ಪಂಚಗವ್ಯ, ಅಗ್ನಿ ಪ್ರತಿಷ್ಠೆ ಮಾಡಲಾಯಿತು. ನಂತರ ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ನಕ್ಷತ್ರ ಹೋಮ, ಆಯುಷ್ಯ ಹೋಮ ಹಾಗೂ ಪೂರ್ಣಹುತಿ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀಥ ಪ್ರಸಾದ ವಿನಿಯೋಗ ಹಾಗೂ ಪ್ರಸಾದ ರೂಪದಲ್ಲಿ ೧೫ ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.