ನಕಲಿ ಕೃಷಿ ಉತ್ಪನ್ನ ವಿರುದ್ಧ ಕ್ರಮಕ್ಕೆ ಆಗ್ರಹಹಸಿ ಶುಂಠಿ ಬೆಳೆಗಳಲ್ಲಿ "ಅಂಗಮಾರಿ " ರೋಗ ಮತ್ತು ವೈರಸ್ ಹಾವಳಿಯಿಂದ ಉಂಟಾದ ಸಂಪೂರ್ಣ ನಾಶಕ್ಕೆ ತುರ್ತು ಪರಿಹಾರ ನೀಡುವ ಜತೆಗೆ ಇತ್ತೀಚಿನ ದಿನಗಳಲ್ಲಿ ನಕಲಿ ಬಿತ್ತನೆ ಬೀಜ, ಔಷಧಿ, ರಸಗೊಬ್ಬರ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿ ಶುಂಠಿ ವರ್ತಕರ ಮತ್ತು ಬೆಳೆಗಾರರ ಸಂಘದಿಂದ ಗುರುವಾರ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಗುಣಮಟ್ಟರಹಿತ ಉತ್ಪನ್ನಗಳಿಂದ ರೋಗ ನಿಯಂತ್ರಣ ಸಾಧ್ಯವಾಗದೆ, ಬೆಳೆ ನಾಶವಾಗಿದ್ದು, ರೈತರ ಆರ್ಥಿಕ ನಷ್ಟವು ತೀವ್ರಗೊಂಡಿದೆ. ಇದು ಕೇವಲ ಆರ್ಥಿಕ ಸಮಸ್ಯೆಯಾಗಿ ಉಳಿಯದೆ, ರೈತರನ್ನು ಆತ್ಮಹತ್ಯೆಯಂತಹ ಗಂಭೀರ ಸಾಮಾಜಿಕ ಸಂಕಷ್ಟ ಸೃಷ್ಟಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.