ಆಲೂರಿನ ವಿದ್ಯಾರ್ಥಿನಿಯರಿಗೆ ಎಚ್‌ಪಿವಿ ಲಸಿಕೆರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಆಲೂರು ತಾಲೂಕಿನ 50 ವಿದ್ಯಾರ್ಥಿನಿಯರಿಗೆ ಪ್ರಥಮ ಹಂತವಾಗಿ ಸ್ತನ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ ಹಾಕಲಾಯಿತು. ಇನ್ಸ್ಪೈರ್ ಇಂಟರ್‌ನ್ಯಾಷನಲ್ ಶಾಲೆ ಕಾರುಗೋಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಳೆದ ತಿಂಗಳು ಮೆಮೋಗ್ರಫಿ ಸ್ಕ್ಯಾನಿಗೆ ಒಳಗಾಗಿದ್ದ 31 ಮಹಿಳೆಯರಿಗೆ ಸ್ಕ್ಯಾನಿಂಗ್ ರಿಪೋರ್ಟನ್ನು ಸಹ ನೀಡಲಾಯಿತು. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಸಾವಿತ್ರಿ ಮಾತನಾಡಿ, ಹೇಮಂತ್ ಕುಮಾರ್ ಅವರು ಇಂತಹ ಕಾರ್ಯ ಮಾಡಲು ಅವರ ತಾಯಿ ಆಶೀರ್ವಾದವೇ ಪ್ರಮುಖ ಕಾರಣ. ಅವರ ತಾಯಿ ನೆನಪಿಗಾಗಿ ದುಡಿಯುತ್ತಿರುವುದು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕೆಂದರು.