ರಾಜಕೀಯದಲ್ಲಿ ಆದರ್ಶ ನಡವಳಿಕೆ ಅಗತ್ಯರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ, ಕೀರ್ತಿ, ಅಪಕೀರ್ತಿ, ಆರೋಪ ಪ್ರತ್ಯಾರೋಪಗಳು ಸಹಜ. ಆದರೆ ವೈಯಕ್ತಿಕ ಸ್ವಾರ್ಥಕ್ಕಾಗಿ ಮತ್ತೊಬ್ಬರನ್ನು ನೋಯಿಸುವುದು ಅಥವಾ ಅಪಪ್ರಚಾರ ಮಾಡುವುದು ಎಂದಿಗೂ ಆದರ್ಶ ರಾಜಕಾರಣಿಯ ಗುಣವಲ್ಲ ಎಂದು ಹೇಳಿದರು. ಸಮಾಜ ಸೇವೆಯ ಹಂಬಲ ಹೊಂದಿರುವವರಿಗೆ ರಾಜಕೀಯವೇ ಸೂಕ್ತ ಮಾರ್ಗವಾಗಿದ್ದು, ಜನರ ನೋವು ನಲಿವುಗಳಿಗೆ ಸ್ಪಂದಿಸುವ ಮನಸ್ಥಿತಿ ಹೊಂದಿದವರನ್ನು ಜನರು ಯಾವ ಜಾತಿ ಧರ್ಮವೂ ನೋಡದೆ ಬೆಂಬಲಿಸುತ್ತಾರೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಚ್.ಆರ್. ಸ್ವಾಮಿ ಅಭಿಪ್ರಾಯಪಟ್ಟರು.