ಡಿಜೆಗಾಗಿ ಭಕ್ತರು ಪೊಲೀಸರ ನಡುವೆ ವಾಗ್ವಾದಕುಶಾಲನಗರ ಬಡಾವಣೆಯ ಅಣ್ಣಪ್ಪವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು. ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಡಿ.ಜೆ ಸದ್ದು,ಪಟಾಕಿಗಳ ಚಿತ್ತಾರದ ನಡುವೆ ಆದ್ಧೂರಿಯಾಗಿ ಮೆರವಣಿಗೆ ನಡೆಸಲಾಗಿತ್ತು. ಆದರೆ, ಸಕಲೇಶ್ವರಸ್ವಾಮಿ ದೇವಸ್ಥಾನ ಸಮೀಪ ಮೆರವಣಿಗೆ ಆಗಮಿಸಿದ ವೇಳೆ ರಾತ್ರಿ 10ಕ್ಕೆ ಪೊಲೀಸರು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಸಿಟ್ಟಾದ ಆಯೋಜಕರು 10.30ರವರೆಗೆ ಡಿ.ಜೆ ಬಳಸಲು ಅನುಮತಿ ಪಡೆಯಲಾಗಿದೆ. ಆದರೆ, 10 ಗಂಟೆಗೆ ಡಿ.ಜೆ ಬಂದ್ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯರು, ಮಕ್ಕಳು ಸೇರಿದಂತೆ ಆಯೋಜಕರು ಪ್ರತಿಭಟನೆ ನಡೆಸಿ, ಡಿ.ಜೆ ಬಳಸಲು ಅನುಮತಿ ನೀಡದ ಹೊರತು ಗಣೇಶಮೂರ್ತಿ ವಿಸರ್ಜಿಸುವುದಿಲ್ಲ ಎಂದು ಪಟ್ಟು ಹಿಡಿದರು.