ಅನಿಯಂತ್ರಿತ ಜೀವನಶೈಲಿ ಹೃದಯ ರೋಗಕ್ಕೆ ಕಾರಣಇಂಡಿಯಾನಾ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಎಂ. ಅನೂಪ್ ಮಾತನಾಡಿ, ಅನಿಯಂತ್ರಿತ ಜೀವನ ಶೈಲಿ, ವ್ಯಾಯಾಮದ ಕೊರತೆ, ಅತಿಯಾದ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಅಸಮರ್ಪಕ ಆಹಾರ ಪದ್ಧತಿ ಇವುಗಳೆಲ್ಲ ಹೃದಯ ರೋಗದ ಪ್ರಮುಖ ಕಾರಣಗಳು. ಇಂತಹ ಸಂದರ್ಭದಲ್ಲಿ ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ, ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೃದಯದ ನಾಡಿಯನ್ನು ನೀವು ಅರಿತುಕೊಳ್ಳಿ, ಈ ಘೋಷವಾಕ್ಯದೊಂದಿಗೆ ಹೃದಯ ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶವಾಗಿದೆ ಎಂದು ಹೇಳಿದರು.