ದಸರಾ ಉತ್ಸವದ ಮೆರವಣಿಗೆಗೆ ಚಾಲನೆಇತಿಹಾಸ ಪ್ರಸಿದ್ದ ಲಕ್ಷ್ಮೀ ನರಸಿಂಹಸ್ವಾಮಿ, ಅಮೃತೇಶ್ವರ ಸ್ವಾಮಿ, ಉಮಾಮಹೇಶ್ವರಿ, ಗ್ರಾಮದೇವತೆ ದೊಡ್ಡಮ್ಮ ದೇವಿ ದೇವಾಲಯದಲ್ಲಿ ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ ಪೂಜೆ ಸಲ್ಲಿಸಿದರು. ದಸರಾ ಉತ್ಸವವನ್ನು ಉದ್ಘಾಟಿಸಿದ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಾ ಭಾಸ್ತಿ ತಾಲೂಕು ಕೇಂದ್ರದಲ್ಲಿ ಇಷ್ಟು ವೈಭವ ಸಂಭ್ರಮದಿಂದ ದಸರಾ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ಸಂತಸದ ಸಂಗತಿ, ಸಾಹಿತಿಗಳಿಗೆ ಜನರ ಪ್ರೋತ್ಸಾಹ ಅಗತ್ಯ, ತಮ್ಮ ಸಾಹಿತ್ಯ ಕೃಷಿಗೆ ದೊಡ್ಡಮ್ಮ ದೇವಿಯ ಆಶೀರ್ವಾದ ದೊರೆಯಲಿ ಎಂದು ಪ್ರಾರ್ಥಿಸುವುದಾಗಿ ಹೇಳಿ ಜನರಿಗೆ ಶುಭಾಶಯ ಕೋರಿದರು.