ವಿನ್ನರ್ ಚಾಂಪಿಯನ್ ಪಟ್ಟ ಗೆದ್ದ ಪವರ್ ಲಿಫ್ಟಿಂಗ್ ಸಂಸ್ಥೆಈ ಬಾರಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 63 ಪವರ್ ಲಿಫ್ಟರ್‌ಗಳು ಭಾಗವಹಿಸಿದ್ದು, ಅವರು ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ವಿಭಾಗಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ತಂತ್ರದ ಪ್ರದರ್ಶನ ನೀಡಿದರು. ಈ ಸ್ಪರ್ಧೆ ಮೂಲಕ ಹಾಸನ ಜಿಲ್ಲೆಯ ಪವರ್ ಲಿಫ್ಟಿಂಗ್ ಪ್ರತಿಭೆಗಳು ಮತ್ತೊಮ್ಮೆ ಕ್ರೀಡಾ ಲೋಕದಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿವೆ. ಸ್ಪರ್ಧೆಯಲ್ಲಿ ಹಾಸನ ಪವರ್ ಲಿಫ್ಟಿಂಗ್ ಸಂಸ್ಥೆ ಅತ್ಯುತ್ತಮ ಪ್ರದರ್ಶನ ನೀಡಿ ವಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಏರೋ ಫಿಟ್ನೆಸ್ ಜಿಮ್ ತಂಡವು ಶ್ರೇಷ್ಠ ಪ್ರದರ್ಶನದ ಆಧಾರದಿಂದ ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿದೆ.