• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸೆಂಟ್ರಲ್ ಕಾಮರ್ಸ್ ಕಾಲೇಜಿಗೆ ಕ್ರೀಡಾ ಚಾಂಪಿಯನ್‌ಷಿಪ್
ಗುಂಪು ಸ್ಪರ್ಧೆಗಳಲ್ಲಿ ಭಾಗವಹಿಸಿದ ೧೩ ವಿಭಾಗಗಳಲ್ಲಿ ಒಟ್ಟು ೧೦ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಹಾಗೂ ವಯಕ್ತಿಕ ಸ್ಪರ್ಧೆಗಳಲ್ಲಿ ವಿವಿಧ ೧೯ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿರುವುದು ಕಾಲೇಜು ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆಗೂ ಪ್ರಾಮುಖ್ಯತೆ ನೀಡುತ್ತಿರುವುದಕ್ಕೆ ಸಾಕ್ಷಿ. ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾಗೂ ಪ್ರಶಸ್ತಿ ಪಡೆದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡಾಕೂಟದಲ್ಲಿ ಸೆಂಟ್ರಲ್ ಕಾಮರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ೩೨ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಬಾಲಕರ ವಿಭಾಗದ ಚಾಂಪಿಯನ್‌ಷಿಪ್ ಹಾಗೂ ಸಮಗ್ರ ಚಾಂಪಿಯನ್‌ಷಿಪ್ ಪಡೆದು ಹಾಸನ ತಾಲೂಕಿನ ಕ್ರೀಡಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರೈತರಿಗೆ ರಾಗಿ ಹಣ ನೀಡದೇ ವಿಳಂಬ
ಹಳ್ಳಿಮೈಸೂರಿನಲ್ಲಿ ಮಂಗಳವಾರ ಮಧ್ಯಾಹ್ನ ಕರವೇ ಹೋಬಳಿ ಯುವ ಘಟಕದ ಅಧ್ಯಕ್ಷರ ದಯಾನಂದ, ನೇತೃತ್ವದಲ್ಲಿ ತಾಲೂಕು ಹಳ್ಳಿ ಮೈಸೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ತಕ್ಷಣವೇ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ತುರ್ತಾಗಿ ರೈತರ ಖಾತೆಗೆ ಹಣ ಜಮೆ ಮಾಡುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು. ಹೋಬಳಿ ವ್ಯಾಪ್ತಿಯ ರೈತರ ಜತೆಗೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಿಂದ ನಾಡಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಹಳ್ಳಿ ಮೈಸೂರು ಹೋಬಳಿ ಉಪತಹಸೀಲ್ದಾರ್ ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೋಗಿಗಳಿಗೆ ಲಯನ್ಸ್‌ನಿಂದ ಆಹಾರ ಕಿಟ್‌ ವಿತರಣೆ
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಚ್. ರಮೇಶ್ ಹಾಗೂ ಕಾರ್ಯದರ್ಶಿ ಸಿ. ಶಿವಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಗಿಗಳಿಗೆ ತಲಾ ರು. ೧೦೦೦ ಮೌಲ್ಯದ ಒಟ್ಟು ೯ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ ಬಳಲುತ್ತಿರುವ ರೋಗಿಗೆ ಒಂದು ವ್ಹೀಲ್‌ಚೇರ್‌ ಸಹ ನೀಡಲಾಯಿತು. ಈ ಕಾರ್ಯದ ವೈಶಿಷ್ಟ್ಯವೆಂದರೆ, ನಾಲ್ಕು ಫಲಾನುಭವಿಗಳ ಮನೆಗಳಿಗೆ ಸ್ವತಃ ತೆರಳಿ ಅವರ ಆರ್ಥಿಕ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೆರವು ನೀಡಿದದ್ದು. ಇದರಿಂದಾಗಿ ನೀವು ಒಬ್ಬರಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ನೇರವಾಗಿ ತಲುಪಿಸಲು ಸಾಧ್ಯವಾಯಿತು.
ಮಹಿಳೆಯರನ್ನು ಗೌರವಿಸುವ ಪುರುಷ ಸಮಾಜ ಬೆಳವಣಿಗೆ ಹೊಂದಲಿದೆ
ಸಮಾಜದ ಏಳಿಗೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಎ. ಮಂಜು ಹೇಳಿದರು. ಮಹಿಳಾ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದುದ್ದಕ್ಕೂ ಮಹಿಳೆಯರ ಕೊಡುಗೆ ಅಪಾರ. ಎಲ್ಲರ ಏಳಿಗೆಗೆ ಹಾಗೂ ಸಮಾಜದ ಬದಲಾವಣೆ ಮಹಿಳೆಯರೇ ಕಾರಣ. ಮಹಿಳೆಯರನ್ನು ಗೌರವಿಸುವ ಪುರುಷ ಸಮಾಜ ಬೆಳವಣಿಗೆ ಹೊಂದಲಿದೆ ಎಂದರು. ಸಿಡಿಪಿಒ ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ 110 ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಎಲ್‌ಇಡಿ ಟಿವಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಮತ್ತು ಸಮವಸ್ತ್ರ ನೀಡಿದೆ ಎಂದರು.
ಆಯುಧಪೂಜೆ ವ್ಯಾಪಾರ ಬಲುಜೋರು
ಆಯುಧ ಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದುಕುಂಬಳ, ನಿಂಬೆಹಣ್ಣು, ಹೂವು ಸೇವಂತಿಗೆ, ಬಾಳೆದೆಲೆಗೆ ಭಾರೀ ಬೇಡಿಕೆ ಕಂಡುಬಂದಿತು. ಒಂದು ಬೂದುಕುಂಬಳಕಾಯಿಗೆ ೫೦ರಿಂದ ೧೦೦ ರು.ಗಳಿಗೆ ಮಾರಾಟ ಮಾಡಲಾಯಿತು. ಇನ್ನು ಪುಟ್ಬಾಳೆ ಕೇಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಬೆಲೆಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಉಳಿದಂತೆ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.
ನಿಗೂಢ ವಸ್ತು ಸ್ಫೋಟದಿಂದ ದಂಪತಿ ಸ್ಥಿತಿ ಚಿಂತಾಜನಕ
ಮೋಹನ್ ಆಚಾರ್‌ ಎಂಬುವರ ಇತ್ತೀಚೆಗೆ ನಿರ್ಮಾಣಗೊಂಡ ಹೊಸ ಮನೆಯಲ್ಲಿ ನಿಗೂಢ ವಸ್ತುಗಳು ಸ್ಫೋಟಗೊಂಡಿದ್ದು, ಅದರ ತೀವ್ರತೆಗೆ ವಾಸದ ಮನೆಯ ವಸ್ತುಗಳು ಕಿಟಕಿ ಬಾಗಿಲುಗಳು ಪೀಠೋಪಕರಣಗಳ ಗಾಜುಗಳು ಪುಡಿಪುಡಿ ಆಗಿವೆ. ಮನೆಗೆ ಹಾಕಿದ್ದ ಮೇಲ್ಛಾವಣಿಯ ತಗಡಿನ ಶೀಟ್‌ಗಳು ಸುಮಾರು 100-150 ಅಡಿಗಳಷ್ಟು ದೂರ ಹಾರಿ ಬಿದ್ದಿವೆ. ಕೆಲ ಶೀಟುಗಳು ರಸ್ತೆ ಬದಿಗಿದ್ದ ಸುಮಾರು 40- 50 ಅಡಿ ಎತ್ತರದ ಮರದ ಮೇಲೆ ಹೋಗಿ ನೇತುಹಾಕಿಕೊಂಡಿವೆ. ಕೆಲವೊಂದು ರಸ್ತೆ ಬದಿಯಲ್ಲಿ ಹಾರಿ ಬಿದ್ದಿವೆ. ಮನೆಯೊಳಗಿದ್ದ ಸುದರ್ಶನ್ ಆಚಾರ್‌ರ ತಂದೆ ಮೋಹನ್ ಆಚಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಪತ್ರಕರ್ತರ ನಿಸ್ವಾರ್ಥ ಸೇವೆ ಶ್ಲಾಘನೀಯ
ಜಿಲ್ಲಾ ಪತ್ರಕರ್ತರ ಸಂಘಕ್ಕೆ ಬರಲು ಸಂತಸವಾಗುತ್ತದೆ. ಒಗ್ಗಟ್ಟಿನಿಂದ ಇದ್ದೀರಿ, ರಾಜ್ಯ ಸಂಘವು ಸಹ ಜಿಲ್ಲಾ ಸಂಘಗಳನ್ನು ಒಗ್ಗಟ್ಟಿನಿಂದ ಮುನ್ನಡೆಸುತ್ತಾ ಸಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಸಂಘದ ಕಟ್ಟದಲ್ಲಿ ನೂತನವಾಗಿ ಡಿವಿಜಿ ಸಭಾಂಗಣ ನಿರ್ಮಾಣವಾಗಿದ್ದು ಇದರ ಸಂಪೂರ್ಣ ವೆಚ್ಚದ ಅನುದಾನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಜಿಲ್ಲಾ ಸಂಘವು ಇತ್ತೀಚೆಗೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ, ಪತ್ರಕರ್ತರಿಗೆ ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರ ಮಗಳನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದು ಮುಂದೆಯೂ ಇದೇ ರೀತಿ ಸಂಘವು ಮುನ್ನಡೆಯಲಿ ಎಂದು ಶುಭಕೋರಿದರು.
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪಟೇಲ್ ಶಿವಪ್ಪ ಅಧಿಕಾರ ಸ್ವೀಕಾರ
ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹಾಸನದಲ್ಲಿ ಬಾಕಿ ಉಳಿದ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವುದು ನನ್ನ ಮೊದಲ ಆದ್ಯತೆ.
ಮೀಸಲು ಅರಣ್ಯ ಗೊಂದಲ ಬಗೆಹರಿಸಲು ಬಿ. ಶಿವರಾಂ ಆಗ್ರಹ
ಜಿಲ್ಲೆಯ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿನ ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುವ ಬದಲು ಅಧಿಕಾರಿಗಳ ವರ್ಗಾವಣೆಯ ಸ್ಪರ್ಧೆಯಲ್ಲಿ ನಿರತರಾಗಿದ್ದಾರೆ. ‘ತಾ ಮುಂದು, ನಾ ಮುಂದು’ ಎಂಬಂತೆ ಒತ್ತಡ ಹಾಕುವ ಪೈಪೋಟಿ ಮಾತ್ರ ನಡೆಯುತ್ತಿದೆ. ರೈತರ ಜ್ವಲಂತ ಸಮಸ್ಯೆಗಳಿಗೆ ಅವರಿಗೆ ಆಸಕ್ತಿ ಇಲ್ಲ.
ಜಿಲ್ಲಾಧಿಕಾರಿಗಳೇ ಕೆಳಮಟ್ಟದ ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ: ಎಚ್.ಡಿ.ರೇವಣ್ಣ
ಈ ಜಿಲ್ಲಾಧಿಕಾರಿ ಹೊಡೆತ ತಡೆಯದೇ ಕೆಲವು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಯಾರಾದರೂ ಸೂಸೈಡ್ ಮಾಡಿಕೊಂಡರೆ ಜಿಲ್ಲಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಡೀಸಿಯವರ ಒತ್ತಡದಿಂದ ಸೂಸೈಡ್ ಮಾಡಿಕೊಳ್ಳುವ ಹಂತಕ್ಕೆ ಹೋಗುವಂತಾಗಿದೆ ಎಂದು ಒಬ್ಬ ತಹಸೀಲ್ದಾರ್ ನನ್ನ ಬಳಿ ಹೇಳಿಕೊಂಡಿದ್ದಾರೆ.
  • < previous
  • 1
  • ...
  • 16
  • 17
  • 18
  • 19
  • 20
  • 21
  • 22
  • 23
  • 24
  • ...
  • 545
  • next >
Top Stories
ಕ್ಯಾನ್ಸರ್ ಕಾರಕ ಎನ್ನುವುದು ಅಡಕೆಗೆ ಅಂಟಿದ ಕಳಂಕ : ಬೆಳೆಗಾರರಲ್ಲಿ ಆತಂಕ
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌
ಹಣಕಾಸು ಯೋಜನೆ ಮಾಡಲು 7 ಎಐ ಟೂಲ್‌ಗಳು
ಕಾಂಗ್ರೆಸಲ್ಲಿ ನವೆಂಬರ್‌ ಕ್ರಾಂತಿ ಖಚಿತ : ಅಶೋಕ್‌
ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಕೊಡಿ : ನರೇಂದ್ರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved