ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಅವಶ್ಯಕಲಿಂಗಾಯತ ಧರ್ಮವು ತನ್ನದೇ ಆದ ಆಚರಣೆ, ನಂಬಿಕೆ, ತತ್ವಶಾಸ್ತ್ರ ಹೊಂದಿರುವ ಪ್ರತ್ಯೇಕ ಧರ್ಮ. ಆದರೆ ಇನ್ನೂ ಹಿಂದೂ ಧರ್ಮದ ಅಂಗವೆಂದು ಪರಿಗಣಿಸಲಾಗುತ್ತಿದೆ. ಇದರಿಂದಾಗಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯಗಳು ಸಿಗದೆ ಅನ್ಯಾಯವಾಗಿದೆ. ನಮ್ಮ ಹೋರಾಟವು ಯಾವ ಧರ್ಮ, ಜಾತಿ ಅಥವಾ ಪಕ್ಷದ ವಿರುದ್ಧವಲ್ಲ. ಇದು ಸಮಾಜದ ಹಕ್ಕುಗಳನ್ನು ಪಡೆಯುವ ಹೋರಾಟ ಎಂದು ಸ್ಪಷ್ಟಪಡಿಸಲಾಗಿದೆ. ಲಿಂಗಾಯತ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗಾಯತ ವಿದ್ಯಾರ್ಥಿಗಳಿಗೆ ಶೇ.50 ಮೀಸಲಾತಿ, ವಿದ್ಯಾರ್ಥಿವೇತನ ಹಾಗೂ ಶುಲ್ಕ ವಿನಾಯ್ತಿ, ಬಡ ಕುಟುಂಬಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ಸಾಲ, ಸಬ್ಸಿಡಿ ಹಾಗೂ ಉದ್ಯೋಗ ತರಬೇತಿ, ಮಠ, ಮಂದಿರ, ಗದ್ದುಗೆಗಳ ಆಸ್ತಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದ ನೆರವು ಅಗತ್ಯ ಎಂದರು.