ಹೆಲಿ ಟೂರಿಸಂಗೆ ಜಿಲ್ಲಾ ಮಂತ್ರಿ ಚಾಲನೆಆಗಸದಿಂದ ಹಾಸನ” ಹೆಲಿ ರೈಡ್‌ನಲ್ಲಿ ಭಾಗವಹಿಸುವವರಿಗೆ ಜಿಲ್ಲೆಯ ಶಿಲ್ಪಕಲೆಯ ಮಾಲೆಗಳು ಕಣ್ತುಂಬ ಸಿಗಲಿವೆ. ಬೇಲೂರು ಮತ್ತು ಹಳೇಬೀಡಿನ ಹೊಯ್ಸಳ ಶಿಲ್ಪ ವೈಭವ, ಶ್ರವಣಬೆಳಗೊಳದ ಬಾಹುಬಲಿ ಮಹಿಮೆ, ಮುಂಜಾಬಾದ್ ಕೋಟೆಯ ಪ್ರಾಚೀನತೆ, ಹೇಮಾವತಿ ಹಾಗೂ ಯಗಚಿ ಜಲಾಶಯದ ನೈರ್ಮಲ್ಯ, ಮೂಕನಮನೆ ಜಲಪಾತದ ನೈಸರ್ಗಿಕ ಸೌಂದರ್ಯ ಎಲ್ಲವೂ ಈ ಪ್ರವಾಸದಲ್ಲಿ ಸೇರಿವೆ. ಒಬ್ಬ ಪ್ರಯಾಣಿಕನಿಗೆ ೪,೩೦೦ ರು. ದರ ನಿಗದಿಪಡಿಸಲಾಗಿದೆ.