ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಿಸ್ವಾತಂತ್ರ್ಯದ ದಿನಗಳಲ್ಲಿ ಎಷ್ಟೋ ಜನರ ರಕ್ತದ ಮಡುವಿನಲ್ಲಿ ಹೋರಾಟ ಹಾಗೂ ಶಾಂತಿಯ ಫಲವಾಗಿ ಬ್ರಿಟೀಷರಿಂದ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಪಡೆದುಕೊಂಡೆವು. ದೇಶಕ್ಕಾಗಿ ದುಡಿದ ನೆಹರು, ಸುಭಾಷ್ ಚಂದ್ರಬೋಸ್, ಪಟೇಲ್, ಶಾಸ್ತ್ರೀ ಹೀಗೆ ಅನೇಕ ಮಹನೀಯರ ಹೋರಾಟದ ಫಲವಾಗಿ ಸಿಕ್ಕಿದ್ದು ಸ್ವಾತಂತ್ರ್ಯ. ಪ್ರತಿಯೊಬ್ಬ ಭಾರತೀಯನು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶ ಅಭಿವೃದ್ಧಿಯಾದರೆ ನಾವುಗಳು ಬೆಳೆದಂತೆ. ನಮ್ಮ ದೇಶ ಮುಂದುವರೆಯುತ್ತಿರುವ ದೇಶ, ಸ್ವಾತಂತ್ರ್ಯ ಹೋರಾಟಗಾರರ ತತ್ವ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು. ತ್ಯಾಗ, ಶಾಂತಿ, ಅಹಿಂಸೆಯ ಮಾರ್ಗದಲ್ಲಿ ಸ್ವಾತಂತ್ರ್ಯವನ್ನು ಪಡೆಯಲಾಗಿದೆ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.