ದೇವಿ ದರ್ಶನ ಪಡೆದ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ಹಾಸನಾಂಬೆ ದೇವಿ ದರ್ಶನ ಪಡೆದ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಅರ್ಚಕರು ನೀಡಿದ ಮಂಗಳಾರತಿ ಪಡೆದು ದೇವರ ಸನ್ನಿಧಿಯಿಂದ ಕೊಟ್ಟ ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟು ಹಾಸನಾಂಬೆ ಎಂದರೇ ನಮ್ಮೂರ ಹಬ್ಬ, ಭಾವೈಕ್ಯತೆಯ ಸಂಕೇತವಾಗಿದೆ ಎಂದು ತಮ್ಮ ಬಾಲ್ಯದ ನೆನಪು ಹಂಚಿಕೊಂಡರು. ಹಾಸನಾಂಬೆ ಜಾತ್ರೆ ನಮ್ಮೂರ ಹಬ್ಬ. ಮುಸ್ಲಿಂ, ಹಿಂದೂ ಎಲ್ಲರೂ ಸಮಾನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ನೆಮ್ಮದಿಯ ತಾಣ ಎಂದರು.