ಸೇವೆಗಾಗಿ ಸಿದ್ಧನಾಗಿ ಸಮಾಜದಲ್ಲಿ ಉತ್ತಮ ಪ್ರಜೆ ಆಗಬೇಕುಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ಗೆ ಒಂದು ಉದ್ದೇಶವನ್ನು ಕೊಡಲಾಗಿದ್ದು, ಮುಖ್ಯವಾಗಿ ನೀವು ಸಂತೋಷವಾಗಿರಬೇಕು. ಸೇವೆಗಾಗಿ ಸದಾ ಸಿದ್ಧನಾಗಿರಬೇಕು. ಎಲ್ಲದಕ್ಕಿಂತ ಪ್ರಮುಖವಾಗಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳ್ವೆಯನ್ನು ನಡೆಸುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ತಿಳಿಸಿದರು. ಜಯಚಾಮರಾಜೇಂದ್ರ ಒಡೆಯರ್ ಇದರ ಮೊದಲ ಸದಸ್ಯರಾಗಿ ಅಂದಿನಿಂದ ಇಂದಿನವರೆಗೂ ಬೆಳೆದುಬಂದ ಹಾದಿಯಲ್ಲಿ ಶಿಸ್ತು, ಸಂಯಮ, ಸಮಾಜ ಸೇವೆ, ಪ್ರಕೃತಿ ರಕ್ಷಣೆ ಸಲುವಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.