ಆರ್‌ಎಸ್‌ಎಸ್ ನಿಷೇಧದ ಬದಲು ನಿರ್ಬಂಧಕ್ಕೆ ಚಿಂತನೆನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಜೀವನ ಮತ್ತು ಆರೋಗ್ಯವೇ ಮುಖ್ಯ. ಅವರಿಗೆ ದೊಣ್ಣೆ ಅಲ್ಲ, ಕೈಗೆ ಪೆನ್ನು ಕೊಡಬೇಕು ಎಂಬುದೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯ. ಬುದ್ಧ ಹಾಗೂ ಬಸವ ಕೂಡ ನಮ್ಮ ನಾಡಿಗೆ ಯುದ್ಧವಲ್ಲ, ಶಾಂತಿ ಬೇಕೆಂದು ಹೇಳಿದ್ದಾರೆ. ನಾವು ಎಲ್ಲರೂ ಸಂವಿಧಾನದ ಆಶಯದಂತೆ ಒಂದೇ ರಾಷ್ಟ್ರದವರು. ತಪ್ಪು ಕಲ್ಪನೆ ಬೇಡ. ಪಕ್ಕದ ರಾಜ್ಯದ ವರದಿ ಬರುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಸುಳ್ಳು ಹೇಳಲಾಗಿದೆ ಎಂದು ಕೆಲವರು ಹೇಳಿದರೂ ಸತ್ಯವನ್ನು ಮಾತನಾಡದೆ ಇದ್ದರೆ ಸತ್ಯ ಹೊರಬರುವುದಿಲ್ಲ ಎಂದು ಪ್ರತಿಕ್ರಿಯಿಸಿದರು.