ಕಣಕಟ್ಟೆ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನಕಣಕಟ್ಟೆ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ರಥೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದ ನಡುವೆ ವೈಭವದಿಂದ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು, ಗ್ರಾಮದ ಪ್ರಮುಖ ಬೀದಿಗಳು ಮತ್ತು ದೇವಾಲಯ ಆವರಣವನ್ನು ತಳಿರು, ತೋರಣ, ಬಾಳೇಕಂದುಗಳಿಂದ ಸುಂದರವಾಗಿ ಶೃಂಗರಿಸಲಾಗಿತು.