ಗಂಜಿಗೆರೆಪುರದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ3 ದಿನಗಳಿಂದ ಜರುಗಿದ ಈ ಜಾತ್ರಾ ಮಹೋತ್ಸವದಲ್ಲಿ ಒಂದೊಂದು ದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯ ಜರುಗಿದ್ದು, ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಜಾತ್ರಾ ಮಹೋತ್ಸವದ ಪ್ರಯುಕ್ತ ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿಪ್ರಧಾನೋತ್ಸವ, ಸಂಪ್ರೋಕ್ಷಣೆ, ರಕ್ಷಾ ಬಂಧನ, ಪುಷ್ಪ ಮಂಟಪೋತ್ಸವ, ಸರ್ಪೋತ್ಸವ, ನವಿಲೋತ್ಸವ, ಗಜೇಂದ್ರ ಮೋಕ್ಷ, ಗರುಡೋತ್ಸವ, ಲಕ್ಷ್ಮೀಕಲ್ಯಾಣೋತ್ಸವ, ಅಂಬಾರಿ ಉತ್ಸವ, ಕೃಷ್ಣ ಗಂಧೋತ್ಸವ ಪೂಜಾ ಕಾರ್ಯ ನೆರವೇರಿಸಲಾಯಿತು.