• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕರವೇ ಹಾಸನ ತಾಲೂಕು ಪದಾಧಿಕಾರಿಗಳ ಪದಗ್ರಹಣ
ಕರ್ನಾಟಕ ರಕ್ಷಣಾ ವೇದಿಕೆ ಹಾಸನ ತಾಲೂಕು ಘಟಕದಿಂದ ಪದಾಧಿಕಾರಿಗಳ ಪದಗ್ರಹಣ ಹಾಗೂ ಹೋಬಳಿ ಅಧ್ಯಕ್ಷ, ಹೋಬಳಿ ಪದಾಧಿಕಾರಿಗಳ ಸಭೆ ಯಶಸ್ವಿಯಾಗಿ ಜರುಗಿತು. ಕರವೇ ಜಿಲ್ಲಾಧ್ಯಕ್ಷರಾದ ಸಿ.ಡಿ. ಮನುಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರವೇ ತಾಲೂಕು ಅಧ್ಯಕ್ಷ ಶಿವಣ್ಣಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರವೇ ಶಾಂತಿಗ್ರಾಮ ಹೋಬಳಿ ಅಧ್ಯಕ್ಷರಾಗಿ ಚೇತನ್, ಕಟ್ಟಾಯ ಹೋಬಳಿ ಅಧ್ಯಕ್ಷ ರವಿ, ದುದ್ದ ಹೋಬಳಿ ಅಧ್ಯಕ್ಷ ಪೃಥ್ವಿ, ಸಾಲಗಾಮೆ ಹೋಬಳಿ ಅಧ್ಯಕ್ಷರಾಗಿ ಸುದರ್ಶನ್, ಹಾಸನ ಕಸಾಬ ಅಧ್ಯಕ್ಷರಾಗಿ ಮಧು ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಶಾಂಕ್, ಸಂಘಟನ ಕಾರ್ಯದರ್ಶಿ ತಶ್ವಿನ್ ಗೌಡ ಇತರರ ಪದಗ್ರಹಣ ನಡೆಯಿತು.
ಇಳುವರಿ ಕುಸಿತದ ನಡುವೆಯೂ ಮಾರುಕಟ್ಟೆಗೆ ಸಿದ್ಧವಾಗುತ್ತಿದೆ ತಂಬಾಕು
ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ 7 ಮತ್ತು 63ರ ವ್ಯಾಪ್ತಿಯ ಹರಾಜು ಮಾರುಕಟ್ಟೆಯಲ್ಲಿ ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತದೆ. ಈಗಾಗಲೇ ಬಹುತೇಕ ಬೆಳೆಗಾರರು ಉತ್ಸಾಹದಿಂದ ತಂಬಾಕು ಹದ ಮಾಡುವುದರಲ್ಲಿ ಮತ್ತು ಕಟಾವು ಹಾಗೂ ಹದ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಈ ವರ್ಷ ಮೇ ಮತ್ತು ಜೂನ್‌ನಲ್ಲಿ ಸತತ ಮಳೆ ಸುರಿದಿದ್ದರಿಂದ ಅತಿಯಾದ ತೇವಾಂಶ ಉಂಟಾಗಿದ್ದು, ತಂಬಾಕು ಗಿಡಗಳ ಬೆಳವಣಿಗೆ ಕುಗ್ಗಿದೆ.
ಪಠ್ಯೇತರ ಚಟುವಟಿಕೆಗಳಿಂದ ಕಲಿಕೆಯಲ್ಲಿ ಆಸಕ್ತಿ ಹೆಚ್ಚಲಿದೆ
ವಿದ್ಯೆ ಒಂದೇ ನಮ್ಮ ಬದುಕನ್ನು ಪರಿಪೂರ್ಣಗೊಳಿಸುವುದಿಲ್ಲ. ವಿದ್ಯೆ ಜೊತೆಗೆ ವಿನಯ, ಸೌಜನ್ಯ, ಮಾನವೀಯತೆಯ ಮೌಲ್ಯಗಳು, ವಿವಿಧ ಕಲೆಗಳ ಬಗ್ಗೆ ತಿಳಿದು ಕೊಂಡಿರಬೇಕು ಎಂದರು. ಸುಜಯ್ ಚಿತ್ರಕಲಾ ಅಕಾಡೆಮಿ ಆಯೋಜಿಸಿದ್ದ ತಾಲೂಕು ಮಟ್ಟದ ಸಬ್ ಜೂನಿಯರ್‌, ಜೂನಿಯರ್, ಸೀನಿಯರ್ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕ್ರಮವಾಗಲಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಚನ್ನರಾಯಪಟ್ಟಣ ಯೋಜನಾ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣೆ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಧರ್ಮಸ್ಥಳ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಹೆಸರಿಗೆ ಕಳಂಕ ತರುವ ಹಾಗೂ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ನಾಪತ್ತೆಯಾದ ವ್ಯಕ್ತಿಯ ಕಾರು ನಾಲೆಯಲ್ಲಿ ಪತ್ತೆ
ಹಳೇಕೋಟೆ ಹೋಬಳಿಯ ಹರಳಹಳ್ಳಿ ಗ್ರಾಮದ ಸಮೀಪದ ಹೇಮಾವತಿ ಎಡದಂಡೆ ನಾಲೆಗೆ ಆಗಸ್ಟ್ ೨೩ರ ಶನಿವಾರ ರಾತ್ರಿ ಕಾರು ಬಿದ್ದಿರುವುದನ್ನು ಸ್ಥಳೀಯರು ಭಾನುವಾರ ಮುಂಜಾನೆ ಗಮನಿಸಿ, ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿಶಾಮಕರ ಸಹಾಯದಿಂದ ಕಾರನ್ನು ಹೊರತೆಗೆದು ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಯಾವುದೇ ಮೃತದೇಹವಿರಲಿಲ್ಲ. ಕೊಂತಗೋಡನಹಳ್ಳಿ ಗ್ರಾಮದ ಪ್ರೇಮಕುಮಾರ್ ಅವರಿಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ ಮತ್ತು ಈ ಕಾರು ನಾಲೆಗೆ ಬಿದ್ದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ದೇವರಾಜ ಅರಸು 110ನೇ ಜನ್ಮದಿನಾಚರಣೆ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗ ಹಾಗೂ ಬಡ ಜನರ ಉದ್ಧಾರಕ್ಕಾಗಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದು ಜನಮನದಲ್ಲಿ ಅಜರಾಮರರಾಗಿದ್ದಾರೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆಯಲು ಸದನದ ಗಮನ ಸೆಳೆಯಲಾಗಿದ್ದು, ಅರಸೀಕೆರೆ ತಾಲೂಕಿಗೆ ಐದು ಕೆಪಿಎಸ್ ಶಾಲೆಗಳ ಅನುಮೋದನೆ ದೊರೆತಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಇನ್ನೂ ಎರಡು ವಸತಿ ಶಾಲೆಗಳ ಅಗತ್ಯವಿದೆ. ಶಿಕ್ಷಣ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದೆ ಎಂದರು.
ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲಹಳ್ಳಿ ಶಾಲೆಗೆ ಸಮಗ್ರ ಪ್ರಶಸ್ತಿ
ಪ್ರೌಢಶಾಲೆಗಳ ದಕ್ಷಿಣವಲಯ ಮಟ್ಟದ ಕ್ರೀಡಾಕೂಟದಲ್ಲಿ ೩೦ ಶಾಲೆಗಳು ಭಾಗವಹಿಸಿದ್ದು, ಸರ್ಕಾರಿ ಪ್ರೌಢಶಾಲೆ ಕಲ್ಲಹಳ್ಳಿ ಶಾಲೆಯು ಬಾಲಕಿಯರ ವಿಭಾಗದಲ್ಲಿ ೩೨ ಅಂಕ ಗಳಿಸುವುದರೊಂದಿಗೆ ಪ್ರಥಮ ತಂಡವಾಗಿ ಸಮಗ್ರ ಪ್ರಶಸ್ತಿ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಕೆ ಸಿ ರಘು ಹಾಗೂ ಮುಖ್ಯೋಪಾಧ್ಯಾಯರಾದ ಎ ಎಸ್ ಉಮಾಮಣಿ ಮತ್ತು ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಉತ್ತಮ ವಿದ್ಯಾಭ್ಯಾಸ ನಡೆಸಿ ಆರ್ಥಿಕ ಸ್ವಾವಲಂಬನೆ ಹೊಂದಲು ಡೀಸಿ ಕರೆ
ಪ್ರತಿಯೊಂದು ಮಗುವು ಉತ್ತಮ ವಿದ್ಯಾಭ್ಯಾಸ ನಡೆಸಿ ಮುಂದಿನ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ತಿಳಿಸಿದ್ದಾರೆ. ಎಸ್.ಎಸ್.ಎಲ್.ಸಿ ಹಂತದಲ್ಲಿಯೇ ಮುಂದೆ ಯಾವ ರೀತಿಯ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ವಿ?ಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿ ಎಂದು ತಿಳಿಸಿದರಲ್ಲದೆ, ಜೀವನಕ್ಕೆ ವಿದ್ಯೆ ಭದ್ರ ಬುನಾದಿ, ವಿದ್ಯಾಭ್ಯಾಸ ಮುಗಿಸಿದ ತಕ್ಷಣ ಕೆಲಸ ದೊರೆಯುವುದಿಲ್ಲ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಕೆಲಸ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಧರ್ಮಯಾತ್ರೆ ಧರ್ಮಸ್ಥಳದ ಕಡೆ
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ಬೆನ್ನಲ್ಲೇ ವಕೀಲರ ಧರ್ಮಯಾತ್ರೆ ಧರ್ಮಸ್ಥಳದ ಕಡೆ ಎಂಬ ಘೋಷಣೆಯೊಂದಿಗೆ ಯಾತ್ರೆ ಕೈಗೊಂಡ ಬೆಂಗಳೂರಿನ ವಕೀಲರು ಶನಿವಾರ ಹಾಸನ ನಗರದ ಮೂಲಕ ಹಾದು ಹೋಗುವಾಗ ಜಿಲ್ಲಾ ನ್ಯಾಯಾಲಯದ ಬಳಿ ವಾಹನ ನಿಲ್ಲಿಸಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಭಾರತ ಮಾತೆ ಇರುವ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಪ್ರಯಾಣ ಮುಂದುವರೆಸಿದರು. ವಕೀಲರು ಯಾವತ್ತೂ ಧರ್ಮಸ್ಥಳದ ಜೊತೆಗಿದ್ದಾರೆ. ಸಂಚು ರೂಪಿಸಿದವರ ವಿರುದ್ಧ ಕ್ರಮ ಆಗಲಿ ಎಂದು ವಕೀಲರ ಸಂಘದ ಅಧ್ಯಕ್ಷ ಮೊಗಣ್ಣಗೌಡ ಹೇಳಿದರು.
ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ನೇತೃತ್ವದಲ್ಲಿ ಧರ್ಮ ಯಾತ್ರೆ
ಕೋಟಿ ಕೋಟಿ ಜನರ ಭಕ್ತಿಯ ಕೇಂದ್ರದ ವಿರುದ್ದ ಷಡ್ಯಂತ್ರ ನಡೆಸಲಾಗಿದೆ. ಅಪ ಪ್ರಚಾರ ಮಾಡಿದವರ ವಿರುದ್ಧ ಕ್ರಮ ಆಗಬೇಕು. ಈ ನಿಟ್ಟಿನಲ್ಲಿ ಧರ್ಮ ಉಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮ ಯಾತ್ರೆಯನ್ನು ಮಾಜಿ ಎಂ.ಎಲ್.ಸಿ. ಎಂ.ಎ. ಗೋಪಾಲಸ್ವಾಮಿ ನೇತೃತ್ವದಲ್ಲಿ ನೂರಾರು ಕಾರುಗಳಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಸಂಸದ ಶ್ರೇಯಸ್ ಪಟೇಲ್ ಶುಭ ಕೋರಿದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 498
  • next >
Top Stories
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ
ಅನನ್ಯ ನಾಪತ್ತೆ ಪ್ರಕರಣ: ಸುಜಾತಾ ಭಟ್‌ಗೆ ಬಿಗ್ ರಿಲೀಫ್
ಧರ್ಮಸ್ಥಳ, ಹೆಗ್ಗಡೆಯವರಿಗೆ ಜೈನ ಯತಿಗಳ ಬೆಂಬಲ : ಸತ್ಯ ಬಿಟ್ಟು ಹೋಗಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಮಳೆ ಕಂಟಕ!
ಜಿಬಿಎ ಸೇರಿ 5 ಪಾಲಿಕೆಗಳಿಗೆ ಕಚೇರಿ ಕಟ್ಟಡಗಳ ನಿಗದಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved