ಶ್ರವಣಬೆಳಗೊಳಕ್ಕೆ ಮುನಿಗಳ ತಂಡ ಆಗಮನಶ್ರವಣಬೆಳಗೊಳ ಕ್ಷೇತ್ರಕ್ಕೆ ಆಗಮಿಸಿದ ಆಚಾರ್ಯಶ್ರೀ 108 ವರ್ಧಮಾನ ಸಾಗರ ಮಹಾರಾಜರು ಮತ್ತು ಮುನಿಶ್ರೀ 108 ವಿದ್ಯಾಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿ ವೃಂದದವರನ್ನು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಗುರುವಾರ ಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು. ಪೂರ್ಣಕುಂಭ, ಮಂಗಳ ಕಲಶ, ನಾದಸ್ವರ, ಚಂಡೆವಾದ್ಯ, ನಗಾರಿ, ಚಿಟ್ಟಿಮೇಳ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಧರ್ಮಧ್ವಜ ಹಿಡಿದ ನೂರಾರು ಶ್ರಾವಕ-ಶ್ರಾವಕಿಯರು ಚಂದ್ರಗಿರಿ ಹಾಗೂ ವಿಂಧ್ಯಗಿರಿ ಮಹಾದ್ವಾರದ ಮೂಲಕ ಶ್ರೀಮಠದ ವರೆಗೆ ಜೈಕಾರದೊಂದಿಗೆ ಮೆರವಣಿಗೆ ನಡೆಸಿದರು.