ಬಿಳಿಸುಳಿ ಪೀಡಿತ ಜೋಳದ ಹೊಲಗಳಿಗೆ ವಿಜ್ಞಾನಿಗಳ ಭೇಟಿಹೊಳೆನರಸೀಪುರ ತಾಲೂಕಿನಲ್ಲಿ ಪ್ರಸ್ತುತ ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನದಾಗಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಬಿತ್ತನೆಯಾಗಿರುವ ೪೭೪೦ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ೧೧೮೦ ಹೆಕ್ಟೇರ್ ಪ್ರದೇಶದಲ್ಲಿ ಬಿಳಿ ಸುಳಿ ಅಥವಾ ಕೇದಿಗೆ ರೋಗ ಹರಡಿದ್ದು, ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನಿಂದ ೩ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ತಂಡ ತಾಲೂಕಿನ ಬಾಗಿವಾಳು, ಹರದನಹಳ್ಳಿ, ಶಿಗರನಹಳ್ಳಿ, ಹರಿಹರಪುರ ಗ್ರಾಮಗಳಲ್ಲಿ ರೋಗ ಬಂದಿರುವ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ನೀಡಿದರು.