ಕಾಳ್ಗಿಚ್ಚು ಸಂಭವಿಸದಂತೆ ಎಚ್ಚರಿಕೆ ಅಗತ್ಯಭಾರತದ ಕಾಡುಗಳಲ್ಲಿ ಕಾಳ್ಗಿಚ್ಚಿಗೆ ಮಾನವನೇ ಕಾರಣ ಎಂದು ವಲಯ ಅರಣ್ಯ ಅಧಿಕಾರಿ ಕೆ..ಎನ್. ಹೇಮಂತ್ ತಿಳಿಸಿದರು. ಅರಣ್ಯದಲ್ಲಿ ಚಿರತೆ, ಕರಡಿ, ಜಿಂಕೆ, ಕಡವಿ, ಇತರೆ ವನ್ಯ ಪ್ರಾಣಿಗಳ ವಾಸಸ್ಥಾನವಾಗಿರುತ್ತದೆ. ಸದ್ಯದಲ್ಲಿ ಬೇಸಿಗೆಕಾಲ ಇರುವುದರಿಂದ ಇಂತಹ ಅಮೂಲ್ಯವಾದ ಎಲ್ಲ ಮೀಸಲು ಅರಣ್ಯಗಳನ್ನು ಬೆಂಕಿಯಿಂದ ರಕ್ಷಣೆ ಮಾಡುವುದು ಮತ್ತು ಬೆಂಕಿ ಬೀಳದಂತೆ ಎಚ್ಚರವಹಿಸುವುದು ನಿಮ್ಮ ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿರುತ್ತದೆ ಎಂದರು. ಕಾಡಿನೊಳಗಿನ ದಾರಿಯಲ್ಲಿ ಬೀಡಿ, ಸಿಗರೇಟ್ ಸೇದಿ ಎಸೆಯಬಾರದು ಎಂದು ಸಲಹೆ ನೀಡಿದರು.