ಅಕಾಲಿಕ ಸಾವುಗಳಿಗೆ ಅನಾರೋಗ್ಯವಷ್ಟೇ ಕಾರಣವಲ್ಲಮನುಷ್ಯನ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ  ಹೃದಯಾಘಾತ ಹೆಚ್ಚಾಗಲು ಆಹಾರ ಪದ್ದತಿಯೇ ಕಾರಣವಲ್ಲ. ಯಾಕೆಂದರೆ ನಿತ್ಯ ವ್ಯಾಯಾಮ ಮಾಡುವ, ನಿಯಮಿತವಾದ ಸಾತ್ವಿಕ ಆಹಾರವನ್ನೇ ಸೇವಿಸುವವರಿಗೂ ಹೃದಯಾಘಾತವಾಗಿದೆ. ಹೃದಯಾಘಾತಕ್ಕೆ ಮಾನಸಿಕ ಸ್ಥಿತಿ, ದ್ವೇಷ, ಅಹಂಕಾರ, ಅಸೂಯೆಯೂ ಕಾರಣವಾಗಿದೆ ಎಂದು ತಜ್ಞ ವೈದ್ಯರಾದ ವಿವೇಕ ಜಾಗೃತಿ ಬಳಗದ ಡಾ. ಮಾಧವ ಪೈ ತಿಳಿಸಿದರು. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಸದಾ ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಬದುಕಿರುವವರೆಗೂ ಆರೋಗ್ಯದಿಂದ ಇರಬಹುದು.