ಕವಿತಾ ಸಾವು ಸಾಹಿತ್ಯ ಲೋಕಕ್ಕೆ ನಷ್ಟ: ಜಯಂತಿ ಚಂದ್ರಶೇಖರ್ಡಾ.ಕವಿತಾ ಕೃಷ್ಣ ಸಾಹಿತ್ಯದ ಜ್ಞಾನ ಭಂಡಾರದಂತೆ. ಅವರ ಅಕಾಲಿಕ ಮರಣ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟು ಮಾಡಿದೆ ಎಂದು ಸಾಹಿತ್ಯ ಶಾರದೆ ಜಯಂತಿ ಚಂದ್ರಶೇಖರ್ ತಿಳಿಸಿದರು. ಶ್ರವಣಬೆಳಗೊಳದ ಚಾವುಂಡರಾಯ ಉದ್ಯಾನದಲ್ಲಿ ಮಾಸಿಕ ನಮನ ಬಳಗದವರು ಆಯೋಜಿಸಿದ ಇತ್ತೀಚೆಗೆ ಅಗಲಿದ ಡಾ. ಕವಿತಾ ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.