ಪೋಡಿ ಮಾಡಲು ಲಕ್ಷ್ಮಿಸಾಗರ ಗ್ರಾಮಸ್ಥರ ಆಗ್ರಹಹಾಸನದ ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೆ ನಂಬರ್ ೩೫ ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಬಗರ್ ಹುಕುಂ ಸಾಗುವಳಿ ಭೂಮಿಯನ್ನು ಸಮೀಕ್ಷೆ ಮಾಡಿ, ಪೋಡಿ ಮಾಡಿಕೊಡುವಂತೆ ಕೆಪಿಆರ್‌ಎಸ್ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ನೊಂದ ಕುಟುಂಬದವರು ಮಂಗಳವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.