ನನ್ನನ್ನೇ ಮುಗಿಸುವ ಪ್ಲಾನ್ ನಡೆದಿತ್ತು: ಎಚ್.ಡಿ.ರೇವಣ್ಣ‘ನನ್ನ ಬೆಂಬಲಿಗರನ್ನು ಟಾರ್ಗೆಟ್ ಮಾಡಿಕೊಂಡು ಕೊಲೆ ಮಾಡುವ ಮೂಲಕ ನನ್ನನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ನಾನು ಇಂಥಾ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಹೆದರುವುದಿಲ್ಲ. ಅವರಿಗೆಲ್ಲಾ ಕಾನೂನು ಮೂಲಕವೇ ತಕ್ಕ ಉತ್ತರ ನೀಡುತ್ತೇನೆ’ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಹಾಸನದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು.