ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಸಂಕಷ್ಟದಿಂದ ರಾಜ್ಯ ಪಾರು ಮಾಡಬೇಕಿದೆಕಳೆದ ೫ ವರ್ಷಗಳಿಂದ ೫.೫ ಲಕ್ಷ ಕೋಟಿ ರು. ಸಾಲದ ಹೊರೆ ನಮ್ಮ ರಾಜ್ಯದ ಜನರ ಮೇಲಿದ್ದು, ಈ ಸಾಲಕ್ಕೆ ಪ್ರತಿದಿನ ೧೨೫ ಕೋಟಿ ರು. ಬಡ್ಡಿ ಪಾವತಿಸಬೇಕಿದೆ. ಹೀಗಾಗಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಆರ್ಥಿಕ ಸಂಕಷ್ಟದಿಂದ ರಾಜ್ಯವನ್ನು ಪಾರು ಮಾಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.