ಸಾಧಕರ ಗುರುತಿಸುವುದು ಸಮಾಜದ ಕರ್ತವ್ಯ-ಅಜಿತ ಮಾಗಾವಿಮನುಷ್ಯ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧನೆ ಮಾಡುವುದು ಸಹಜ. ಆದರೆ ತಾನು ಬೆಳೆದು ತನ್ನೊಂದಿಗೆ ಇತರರನ್ನು ಬೆಳೆಸಿ, ಸಮಾಜದ ಋಣ ತೀರಿಸಲು ಮಾಡುವ ನಿಸ್ವಾರ್ಥ ಸೇವೆಯು ನಿಜವಾದ ಸಾಧನೆ. ಅಂಥಹ ಸಾಧಕರನ್ನು ಗುರುತಿಸುವುದು ಸಹ ಸಮಾಜದ ಕರ್ತವ್ಯ ಎಂದು ನಗರದ ಖ್ಯಾತ ಉದ್ಯಮಿ ಅಜಿತ ಮಾಗಾವಿ ಹೇಳಿದರು.