ದೇಶ ರಕ್ಷಣೆಗಾಗಿ ಸಮರ್ಪಿಸಿಕೊಳ್ಳುವ ಯುವ ಪಡೆ ಬೇಕಾಗಿದೆದೇಶಕ್ಕಾಗಿ ಸೈನಿಕರನ್ನು ತರಬೇತಿಗೊಳಿಸುವ ನಿಟ್ಟಿನಲ್ಲಿ ಉಚಿತ ಅಗ್ನಿವೀರ ಆರ್ಮಿ ಕೋಚಿಂಗ್ ಆರಂಬಿಸಿದ್ದು, ಈ ತರಬೇತಿ ನಮಗೆ ಸಂತೋಷ ಸಮಾಧಾನ ನೀಡಿದೆಯಲ್ಲದೆ ವಿವಿಧ ಜಿಲ್ಲೆಗಳಿಂದ ಯುವಕರು ಆಗಮಿಸಿ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಾತೋಶ್ರೀ ಲಿಂ.ರುದ್ರಮ್ಮ ಗುರುಪಾದಪ್ಪ ಕಮಡೊಳ್ಳಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಸಿದ್ದಲಿಂಗಪ್ಪ ಕಮಡೊಳ್ಳಿ ತಿಳಿಸಿದರು.