ಜಾತಿ ಗಣತಿಯೋ, ಶೈಕ್ಷಣಿಕ ಗಣತಿಯೋ ಸಿಎಂ ಸ್ಪಷ್ಟನೆ ನೀಡಲಿಜಾತಿ ಗಣತಿ ಬಗ್ಗೆ ನಮ್ಮಲ್ಲಿ ಎಲ್ಲೂ ಚರ್ಚೆಯೇ ಆಗಿರಲಿಲ್ಲ. ರಾಜ್ಯದಲ್ಲಿ ಆಗಿರುವುದು ಆರ್ಥಿಕ, ಶೈಕ್ಷಣಿಕ ಸಮಿಕ್ಷೆಯೇ ಹೊರತು ಅದು ಜಾತಿ ಗಣತಿ ಅಲ್ಲ. ಇದು ಜಾತಿ ಗಣತಿಯೋ ಅಥವಾ ಶೈಕ್ಷಣಿಕ ಗಣತಿಯೋ ಎಂಬ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.