ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಹಾವೇರಿ ಜನತೆಹಾವೇರಿ ನಗರದಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು. ಹಲಗೆ ಬಾರಿಸುತ್ತ, ರಂಗುರಂಗಿನ ಬಣ್ಣ ಎರಚುತ್ತ ಯುವಕರು, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಬಣ್ಣದ ಓಕುಳಿಯಲ್ಲಿ ಮಿಂದೆದ್ದರು. ಬೆಳಗ್ಗೆಯಿಂದಲೇ ಯುವಕರು ಗುಂಪು ಹಲಗೆ ಬಾರಿಸುತ್ತ ಬೈಕ್ಗಳಲ್ಲಿ ನಗರದ ತುಂಬೆಲ್ಲ ಸಂಚರಿಸಿ ಸಿಳ್ಳೆ, ಕೇಕೆ ಹಾಕಿ ಖುಷಿ ಪಟ್ಟರು. ಸುಡು ಬಿಸಿಲನ್ನೂ ಲೆಕ್ಕಿಸದೇ ಯುವಕರ ದಂಡು ಹಲಗೆ ಬಾರಿಸುತ್ತ, ಬಣ್ಣ ಎರಚುತ್ತ ಸಂತಸಪಟ್ಟರು.