ಸಮಾಧಾನ, ಸಂಸ್ಕಾರಗಳು ಆರೋಗ್ಯಕರ ಜೀವನಕ್ಕೆ ಪ್ರೇರಕ: ಬ್ರಹ್ಮಕುಮಾರಿ ಶಿವಾನಿಅಂಧಕಾರದಲ್ಲಿ ಮುಳುಗಿರುವ ಜಗತ್ತಿಗೆ ಸಂಸ್ಕಾರ, ಸಂಸ್ಕೃತಿಯ ಬೆಳಕು ನೀಡುವ ಮೂಲಕ ಭಾರತ ವಿಶ್ವಗುರು ಎನಿಸಿದೆ. ಆದಿ ಸನಾತನ ಧರ್ಮ ಮತ್ತು ಅಧ್ಯಾತ್ಮ ಭಾರತದ ಜೀವಾಳವಾಗಿವೆ ಎಂದು ಹಾವೇರಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ್ತಿ ಬ್ರಹ್ಮಕುಮಾರಿ ಶಿವಾನಿ ಹೇಳಿದರು.