ಸಾಂಸ್ಕೃತಿಕ ಹಿರಿಮೆಗೆ ಅಗಡಿ ಗ್ರಾಮದ ಕೊಡುಗೆ ಅಪಾರ-ಜಯ ಬಸವ ಮೃತ್ಯುಂಜಯಶ್ರೀಹಾವೇರಿ ಜಿಲ್ಲೆ ಸಾಧು, ಸಂತರ, ಶರಣರ, ದಾರ್ಶನಿಕರ ತವರೂರಾಗಿದೆ. ಜಿಲ್ಲೆಯಲ್ಲಿಯೇ ಅಗಡಿ ಗ್ರಾಮ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಗೆ ಗ್ರಾಮದ ಕೊಡುಗೆ ಅಪಾರ ಎಂದು ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.