ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ, 7 ಜನರ ಲೈಸೆನ್ಸ್ ರದ್ದುಮೂರು ದಿನಗಳಿಂದ ಸತತವಾಗಿ ಹಾವೇರಿ, ಬ್ಯಾಡಗಿ ಸೇರಿದಂತೆ ವಿವಿಧ ಕಚೇರಿಗಳು, ಎಪಿಎಂಸಿ, ಕಸವಿಲೇವಾರಿ ಘಟಕ ಸೇರಿದಂತೆ 28 ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ವಿವಿಧ ಪ್ರಕರಣಗಳಲ್ಲಿ ಸ್ವಯಂ ಪ್ರಕರಣ (ಸುಮೋಟೋ) ದಾಖಲಿಸಲಾಗಿದೆ. ಏಷ್ಯಾದಲ್ಲೆ ಪ್ರಸಿದ್ಧವಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಲ್ಲಿ, ತೂಕದಲ್ಲಿ ಮೋಸ ನಡೆಯುತ್ತಿದೆ. ಈ ಕುರಿತು ಸ್ವಯಂ ಪ್ರಕರಣ ದಾಖಲಿಸಲಾಗಿದೆ. ಏಳು ಜನರ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.