ಸಿದ್ದಾಪುರ ಪ್ರವಾಸಿ ಮಂದಿರ ಸಮೀಪ ತ್ಯಾಜ್ಯ ರಾಶಿ: ಸ್ಥಳೀಯರ ಆಕ್ರೋಶಪ್ರವಾಸಿ ಮಂದಿರದ ಸನಿಹದಲ್ಲೇ ಕಸ ಸುರಿದ ಪರಿಣಾಮ ಆ ಪ್ರದೇಶದಲ್ಲಿ ಸಂಪೂರ್ಣ ದುರ್ವಾಸನೆ ವ್ಯಾಪಿಸಿದೆ. ಈ ಕೊಳೆತ ತ್ಯಾಜದಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದ್ದು, ತಕ್ಷಣವೇ ಕಸವನ್ನು ತೆರವುಗೊಳಿಸಬೇಕು ಹಾಗೂ ಸುರಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ದೇವಣಿರ ಸುಜಯ್, ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.