ಮಡಿಕೇರಿ: ಮಾಜಿ ಸೈನಿಕರಿಗೆ ರೋಟರಿ ವುಡ್ಸ್ ಸನ್ಮಾನಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಾಲ್ವರು ಯೋಧರನ್ನು ಸನ್ಮಾನಿಸುವ ಮೂಲಕ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶುಕ್ರವಾರ ನಗರ ರೋಟರಿ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಸಮಾರಂಭದಲ್ಲಿ ಮಾಜಿ ಸೇನಾಧಿಕಾರಿಗಳಾದ ಹಾನರರಿ ಕ್ಯಾ.ಜಿ.ಎಸ್. ರಾಜಾರಾಮ್, ಎನ್. ಚಂದ್ರನ್, ಪ್ರಮೋದ್ ಕುಮಾರ್ ಸಿ., ಬಾಬು ಪ್ರಸಾದ್ ರೈ ಅವರನ್ನು ಗೌರವಿಸಲಾಯಿತು.