ಮಡಿಕೇರಿಯಲ್ಲಿ ಸಂಭ್ರಮದ ಜಾನಪದ ದಸರಾ: ವೈಭವದ ಮೆರವಣಿಗೆರಾಷ್ಟ್ರದಲ್ಲಿ ಹಲವು ಸಂಸ್ಕೃತಿ, ಜಾನಪದ ಕಲೆಗಳನ್ನು ಒಳಗೊಂಡಿದ್ದರೂ ಸಹ ಮೂಲ ಒಂದೇ ಆಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರಾ ಸಮಿತಿ ವತಿಯಿಂದ ನಡೆದ ಜಾನಪದ ದಸರಾಗೆ ಚಾಲನೆ ನೀಡಿ ಅವರು ಮಾತನಾಡಿದರು.