ನಾಪೋಕ್ಲು: ವೆಸ್ಟ್ ಕೊಳಕೇರಿ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವಉತ್ಸವದ ಅಂಗವಾಗಿ ಶನಿವಾರ ದೇವತಕ್ಕರಾದ ಕಾಂಡಂಡ ಮನೆಯಿಂದ ದೇವರ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ಭಾನುವಾರ ಪಟ್ಟಣಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ಬೆಳಗ್ಗೆ ದೇವರ ದರ್ಶನ, ಬಳಿಕ ಎತ್ತುಪೋರಾಟ, ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಜರುಗಿತು.